Be Yourself, Every Day

Read about our commitment to Belonging at Snap

ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ

ನಾವು ಇತರ ಜನರ ದೃಷ್ಟಿಕೋನಗಳಿಂದ ಜಗತ್ತನ್ನು ನೋಡಿದಾಗ, DEI ಏಕೆ ಅಷ್ಟೊಂದು ಅಗತ್ಯ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಂತರ ಕ್ರಮ ಕೈಗೊಳ್ಳಲು ಮತ್ತು ಅರ್ಥಪೂರ್ಣ ಬದಲಾವಣೆಯನ್ನು ಮಾಡುವುದರಲ್ಲಿ ವೈಯಕ್ತಿಕವಾಗಿ ತೊಡಗಿಸಿಕೊಳ್ಳಲು ನಾವು ಸ್ಫೂರ್ತಿ ಪಡೆಯುತ್ತೇವೆ.

Employee Resource Groups

Snap ನಲ್ಲಿನ ಉದ್ಯೋಗಿ ಸಂಪನ್ಮೂಲ ಗುಂಪುಗಳು (ERGs) ತಮ್ಮ ಗುರುತುಗಳ ಸದೃಶ ಅಂಶವನ್ನು(ಗಳನ್ನು) ಹಂಚಿಕೊಳ್ಳುವ ವ್ಯಕ್ತಿಗಳ ಸಮುದಾಯವನ್ನು ಒಟ್ಟುಗೂಡಿಸುತ್ತವೆ, ಹಾಗೂ ಆ ಮೂಲಕ ತಂಡದ ಸದಸ್ಯರು ಮತ್ತು ಮಿತ್ರರನ್ನು ಗುರುತಿಸುವುದಕ್ಕಾಗಿ ತೊಡಗಿಸಿಕೊಳ್ಳುವಿಕೆಯ ಮತ್ತು ಸುರಕ್ಷಿತವಾದ ಸ್ಥಳಗಳನ್ನು ರಚಿಸುತ್ತವೆ ಹಾಗೂ ಒಳಗೊಳ್ಳುವಿಕೆಯ ಹಂಚಿತ ಪ್ರಜ್ಞೆಯ ಭಾವವನ್ನು ಸೃಷ್ಟಿಸುತ್ತವೆ. ERG ಗಳು ತಂಡದ ಸದಸ್ಯರಿಗಾಗಿ ಪರಸ್ಪರರನ್ನು ಸಶಕ್ತಗೊಳಿಸಲು ಮತ್ತು ಬೆಂಬಲಿಸಲು, ಪರಾನುಭೂತಿಯನ್ನು ಉತ್ತೇಜಿಸಲು, ಸಮುದಾಯದ ಒಂದುಗೂಡುವಿಕೆಯನ್ನು ಸಂಭ್ರಮಿಸಲು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಅವಕಾಶಗಳನ್ನು ನೀಡುತ್ತವೆ. ಅಂತಿಮವಾಗಿ, ERG ಗಳು ನಮ್ಮ ತಂಡಗಳಾದ್ಯಂತ ನಾವೀನ್ಯತೆ ಮತ್ತು ಸೃಜನಶೀಲತೆಗಳ ವರ್ಧನೆಗೆ ನಿರ್ಣಾಯಕವಾಗಿವೆ, ಹಾಗೂ ಆ ಮೂಲಕ ತಂಡದ ಸದಸ್ಯರು ತಮ್ಮ ಕೌಶಲ್ಯಗಳನ್ನು ವರ್ಧಿಸಲು, ತಮ್ಮ ಸಂಪರ್ಕಜಾಲಗಳನ್ನು ವಿಸ್ತರಿಸಲು ಮತ್ತು ಅವರ ನೈಜ ಸ್ವಭಾವಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತವೆ.

SnapAbility

SnapAbility ಅನ್ನುವುದು ವೈಕಲ್ಯ ಇದೆ ಎಂದು ಗುರುತಿಸಿಕೊಳ್ಳುವ ಜನರ ಹಾಗೂ ಅವರ ಮಿತ್ರರು, ಪಾಲಕರು ಮತ್ತು ಅವರ ಪರ ವಕಾಲತ್ತು ಮಾಡುವವರ ಸಮುದಾಯವಾಗಿದೆ. ಮಾನಸಿಕ ಮತ್ತು ದೈಹಿಕ ವೈಕಲ್ಯಗಳ ಕುರಿತು ಮತ್ತು ವಿವಿಧ ದೈಹಿಕ ಭಿನ್ನತೆಗಳ ಕುರಿತು ಸಹಾನುಭೂತಿ, ಗೌರವ ಮತ್ತು ಕರುಣೆಯನ್ನು ಪ್ರಚಾರ ಮಾಡುವ ಹಾಗೂ ನಮ್ಮ ಸಾಮರ್ಥ್ಯಗಳ ಮೂಲಕ ಪರಸ್ಪರರನ್ನು ಸಬಲಗೊಳಿಸಲು ಸಮುದಾಯಕ್ಕೆ ಬೆಂಬಲ ಒದಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಎಲ್ಲ ವರ್ಗದ ಜನರಿಗೆ ನಮ್ಮ ಉತ್ಪನ್ನಗಳು ಹೇಗೆ ಪ್ರವೇಶಾರ್ಹವಾಗಿವೆ ಎನ್ನುವುದರ ಕುರಿತು ಗಮನ ಹರಿಸುವ ಮೂಲಕ ನಮ್ಮ ಬಳಕೆದಾರರಿಗೆ ಸಹಾನುಭೂತಿಯನ್ನು ತೋರಿಸುವ ಗುರಿಯನ್ನು ಕೂಡ ನಾವು ಹೊಂದಿದ್ದೇವೆ.

SnapAsia

SnapAsia, ತಮ್ಮ ಅನುಭವಗಳು ಮತ್ತು ಸವಾಲುಗಳನ್ನು ಹಂಚಿಕೊಳ್ಳಲು, ಸಾಂಸ್ಕೃತಿಕ ತಿಳುವಳಿಕೆಯನ್ನು ಹೆಚ್ಚಿಸಲು ಮತ್ತು ಏಷ್ಯಾದ ಸಂಸ್ಕೃತಿಯನ್ನು ಪ್ರತಿನಿಧಿಸಲು ಏಷ್ಯನ್ ಮತ್ತು ಪೆಸಿಫಿಕ್ ದ್ವೀಪ ರಾಷ್ಟ್ರಗಳ ಜನರನ್ನು ಜೊತೆಗೂಡಿಸುತ್ತದೆ. ಸಮುದಾಯದ ಸದಸ್ಯರಿಗೆ ಸೇರಿರುವ ಮತ್ತು ಪ್ರೇರಣೆಯ ನೈಜ ಭಾವನೆಯನ್ನು ಒದಗಿಸುವ ಹಾಗೂ Snap ನಲ್ಲಿ ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಮುಂದುವರಿಯಲು ಬೆಂಬಲ ಒದಗಿಸುವ ಗುರಿಯನ್ನು SnapAsia ಹೊಂದಿದೆ.

SnapFamilia

SnapFamilia ಹಿಸ್ಪಾನಿಕ್ ಮತ್ತು ಲ್ಯಾಟಿನ್ಎಕ್ಸ್/ಎ ಸಮುದಾಯಗಳನ್ನು ಒಳಗೊಂಡ
ವೈವಿಧ್ಯತೆಯ ವಿಶಿಷ್ಟ ಮಟ್ಟಗಳನ್ನು ಸಬಲೀಕರಿಸುತ್ತದೆ, ಎತ್ತಿಹಿಡಿಯುತ್ತದೆ ಮತ್ತು ಸಂಭ್ರಮಾಚರಣೆ ಮಾಡುತ್ತದೆ.

SnapHabibi

ನೈಋತ್ಯ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಸಾಮಾಜಿಕ ಮತ್ತು ನೈತಿಕ ಸಂಸ್ಕೃತಿಯನ್ನು ಪ್ರಚಾರ ಮಾಡಲು, ವೃತ್ತಿ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪರಸ್ಪರರನ್ನು ಹುರಿದುಂಬಿಸಲು ಮತ್ತು ವಿಸ್ತಾರವಾದ ನೈಋತ್ಯ ಏಷ್ಯಾದ ಮತ್ತು ಉತ್ತರ ಆಫ್ರಿಕಾದ ಸಮುದಾಯಗಳಿಂದ ಕಲಿಯಲು ಮತ್ತು ಅವರಿಗಾಗಿ ಸೇವೆ ಸಲ್ಲಿಸಲು SnapHabibi, ಧಾರ್ಮಿಕ ಅಥವಾ ರಾಜಕೀಯ ನಂಬಿಕೆಯನ್ನು ಪರಿಗಣಿಸದೆ — ವೃತ್ತಿಪರ ಸಮುದಾಯದಲ್ಲಿನ ತನ್ನ ಸದಸ್ಯರನ್ನು ಒಟ್ಟುಗೂಡಿಸುತ್ತದೆ, ಇದರಿಂದಾಗಿ ಒಳಗೊಳ್ಳುವ ಮತ್ತು ಸಬಲೀಕರಿಸುವ ವಿಧಾನದಲ್ಲಿ Snapchat ಮೂಲಕ ಮಾನವರ ಪ್ರಗತಿಯನ್ನು ನಾವು ಮುನ್ನಡೆಸಬಹುದು.

SnapNoir

ಮಿತ್ರತ್ವ ಮತ್ತು ಸುರಕ್ಷಿತ ಸ್ಥಳದ ಸಮುದಾಯವನ್ನು ಪೋಷಿಸಲು, ವಿವಿಧೆಡೆ ಇರುವ ಆಫ್ರಿಕನ್ ಸಮುದಾಯವನ್ನು ಮತ್ತು Snap ನಲ್ಲಿರುವ ಮಿತ್ರರನ್ನು SnapNoir ಜೊತೆಗೂಡಿಸುತ್ತದೆ. Snap ನಲ್ಲಿ ಮತ್ತು ಸಮುದಾಯದಲ್ಲಿ ಆಫ್ರಿಕನ್ ಸಮುದಾಯದ ಜನರಿಗೆ ಸಾಂಸ್ಕೃತಿಕ ತಿಳುವಳಿಕೆ, ವೈವಿಧ್ಯತೆ ಮತ್ತು ಸಾಮಾಜಿಕ ಪ್ರಭಾವವನ್ನು ಪೋಷಿಸಲು ವೇದಿಕೆ ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.

SnapParents

ಬೆಂಬಲ ಮತ್ತು ಮಾರ್ಗದರ್ಶನ ಒದಗಿಸುವ, ಕೆಲಸ/ಜೀವನದ ಸಮತೋಲನ ಹಾಗೂ ಸ್ವಯಂ ಕಾಳಜಿಯನ್ನು ಪ್ರೋತ್ಸಾಹಿಸುವ ಹಾಗೂ ಉದ್ಯೋಗದಲ್ಲಿರುವ ಪೋಷಕರು ಎದುರಿಸುವ ವಿಶಿಷ್ಟ ಸವಾಲುಗಳ ಕುರಿತು ಬೆಳಕು ಚೆಲ್ಲುವ ಮೂಲಕ ಎಲ್ಲ ಪೋಷಕರು ಮತ್ತು ಆರೈಕೆದಾರರಿಗಾಗಿ SnapParents ಇಲ್ಲಿದೆ.

SnapPride

SnapPride ಲಿಂಗ ಗುರುತು, ಲಿಂಗದ ಅಭಿವ್ಯಕ್ತಿ, ಲೈಂಗಿಕತೆ ಮತ್ತು ಲೈಂಗಿಕ ಗುರುತಿನ ವೈವಿಧ್ಯತೆಯನ್ನು ಆಚರಿಸುತ್ತದೆ. ಯಾವುದೇ ಬಗೆಯ LGBTQIA2S+ ಅನುಭವವನ್ನು ಜೀವಿಸುತ್ತಿರುವ ತಂಡದ ಸದಸ್ಯರಿಗಾಗಿ ನಾವು ಸಮುದಾಯವನ್ನು ರಚಿಸಿದ್ದೇವೆ ಮತ್ತು ಬೆಂಬಲಿಸುವ ಸಹಭಾಗಿಗಳನ್ನು ನಾವು ಸ್ವಾಗತಿಸುತ್ತೇವೆ. LGBTQIA2S+ ಗುರುತನ್ನು ಪ್ರಧಾನ ಭೂಮಿಕೆಗೆ ತರುವ, ಲಿಂಗಪರಿವರ್ತಿತರು ಮತ್ತು QBIPOC ಧ್ವನಿಗಳನ್ನು ಎತ್ತಿಹಿಡಿಯುವ ಮತ್ತು ಕ್ವೀರ್ ಕೇಂದ್ರಿತ ಉಪಕ್ರಮಗಳ ಮೂಲಕ ಅರ್ಥಮಾಡಿಕೊಳ್ಳುವಿಕೆ ಮತ್ತು ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ.

SnapShalom

ಯಹೂದಿ ಸಂಸ್ಕೃತಿಯನ್ನು ಆಚರಿಸುವುದಕ್ಕಾಗಿ ಜೊತೆಗೂಡಲು ಮತ್ತು Snap ನ ಒಳಗೆ ಮತ್ತು ಹೊರಗೆ ನಮ್ಮ ಸಮುದಾಯವನ್ನು ಬೆಂಬಲಿಸಲು ಮತ್ತು ಅವರ ಪರ ವಕಾಲತ್ತು ಮಾಡಲು Snap ನಲ್ಲಿನ ಯಹೂದಿ ತಂಡದ ಸದಸ್ಯರಿಗೆ SnapShalom ಒಂದು ಸ್ಥಳಾವಕಾಶವಾಗಿದೆ.

SnapVets

SnapVets ಸಮಾನ ಅನುಭವಗಳು, ಸ್ವಯಂಸೇವಾ ಚಟುವಟಿಕೆಗಳು, ನೇಮಕಾತಿ ಈವೆಂಟ್‌ಗಳು, ವೃತ್ತಿ ಬೆಳವಣಿಗೆ ಅವಕಾಶಗಳು ಮತ್ತು ದೀರ್ಘಕಾಲಿಕ ಉಳಿಸಿಕೊಳ್ಳಿವಿಕೆ ಮೂಲಕ ಪರಸ್ಪರರನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಮಾಜಿ ಸೈನಿಕರು, ಮೀಸಲು ಪಡೆಯ ಸೈನಿಕರು, ಅವರ ಕುಟುಂಬ ಸದಸ್ಯರು ಮತ್ತು ಮಿತ್ರರ ನಮ್ಮ ಹೆಮ್ಮೆಯ ಜಾಗತಿಕ ಸಮುದಾಯದ ಜೊತೆ ಸಕ್ರಿಯವಾಗಿ ತೊಡಗಿಕೊಳ್ಳುತ್ತದೆ. ನಮ್ಮ ERG ಕೆಲಸದ ಮೂಲಕ ನಮ್ಮ ಸೇವೆಯ ಪ್ರಬಲ ಮೌಲ್ಯವನ್ನು ಮುಂದುವರಿಸಲು ಮತ್ತು Snap ತಂಡವನ್ನು ಸಕಾರಾತ್ಮಕವಾಗಿ ಪ್ರತಿನಿಧಿಸಲು ನಾವು ಆಶಿಸುತ್ತೇವೆ.

SnapWomen

SnapWomen, Snap ನಲ್ಲಿ ಮಹಿಳೆಯರನ್ನು ಬೆಂಬಲಿಸುತ್ತದೆ ಮತ್ತು ಅವರನ್ನು ಮುನ್ನಡೆಸುತ್ತದೆ. ಅದರರ್ಥ ಇಂದು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಅನ್ವೇಷಿಸಲು ಕಾರ್ಯಾಗಾರಗಳು, ಸಹಾಯದ ಅಗತ್ಯವಿರುವ ಮಹಿಳೆಯರಿಗೆ ಬೆಂಬಲ ನೀಡುವುದು ಮತ್ತು Snap ಸಮುದಾಯವನ್ನು ಜೊತೆಗೂಡಿಸುವುದು ಆಗಿದೆ.

ನಮ್ಮ ಪಾಲುದಾರರು