A Kind, Smart, & Creative Culture
We believe the camera presents the greatest opportunity to improve the way people live and communicate.
Leaders on Culture at Snap
Hear from our leadership on what it's like to work at Snap, Inc. and how we live our values of kind, smart, and creative every day.
Snap ನಲ್ಲಿ 12 ವರ್ಷಗಳು
Snap ನಲ್ಲಿ ನಾವು 12 ವರ್ಷಗಳನ್ನು ಸಂಭ್ರಮಿಸಿದೆವು! ಮುಗಿದ ಇನ್ನೊಂದು ವರ್ಷದಲ್ಲಿ, Snap ಅನ್ನು ಯಾವುದು ಅಂತಹ ವಿಶೇಷ ಸ್ಥಳವಾಗಿಸುತ್ತದೆ ಎಂಬುದರ ಮೇಲೆ ನಾವು ಬೆಳಕು ಚೆಲ್ಲಿದೆವು — ನಮ್ಮ ದಯೆ, ಜಾಣ ಮತ್ತು ಸೃಜನಶೀಲ ಸಂಸ್ಕೃತಿ. Snap ನಲ್ಲಿ ಕೆಲಸ ಮಾಡುವುದಕ್ಕೆ ಸಂಬಂಧಿಸಿ ಯಾವುದನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ, ನಾವು ಯಾಕೆ ಭಿನ್ನವಾಗಿದ್ದೇವೆ ಮತ್ತು ನಮ್ಮ ಕಂಪನಿಯ ಸಂಸ್ಕೃತಿಯನ್ನು ವ್ಯಾಖ್ಯಾನಿಸಲು ಅವರು ಯಾವ ಪದ ಬಳಸುತ್ತಾರೆ ಎನ್ನುವ ಕುರಿತು ಜಗತ್ತಿನಾದ್ಯಂತದ ನಮ್ಮ ತಂಡದ ಸದಸ್ಯರಿಂದ ಆಲಿಸಿ.
Snap ಕೌನ್ಸಿಲ್
ಕೌನ್ಸಿಲ್ ಎನ್ನುವುದು ಸ್ಟೋರಿಗಳನ್ನು ಹಂಚಿಕೊಳ್ಳಲು, ಆಳವಾಗಿ ಕೇಳಲು ಮತ್ತು ಹೃದಯದಿಂದ ಮಾತನಾಡಲು ಜನರು ಒಟ್ಟಿಗೆ ಸೇರುವ ಅಭ್ಯಾಸವಾಗಿದೆ. ತಂಡದ ಸದಸ್ಯರು ಅಡ್ಡಿಪಡಿಸದೆ ಮಾತನಾಡಲು ಅವಕಾಶವನ್ನು ಹೊಂದಿದ್ದಾರೆ, ಇದು ಎಲ್ಲರಿಗೂ ಅವರ ಮಾತನ್ನು ಇತರರು ಕೇಳಿಸಿಕೊಳ್ಳಲು ಅವಕಾಶವನ್ನು ಖಚಿತಪಡಿಸುತ್ತದೆ. ಸ್ಟೋರಿಗಳನ್ನು ಹಂಚಿಕೊಂಡಂತೆ, ಇತರರು ಪೂರ್ಣ ಹೃದಯದಿಂದ ಕೇಳುತ್ತಾರೆ. ಇದು ಅಂತರ್ಗತ ಕೆಲಸದ ವಾತಾವರಣವನ್ನು ಉತ್ತೇಜಿಸುತ್ತದೆ, ಅಲ್ಲಿ ಜನರು ಸೇರ್ಪಡೆಯ ಭಾವನೆಯನ್ನು ಅನುಭವಿಸುತ್ತಾರೆ.
ನಾವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುವ ಜಾಗತಿಕ ಕಂಪನಿಯಾಗಿದ್ದೇವೆ - ಆದ್ದರಿಂದ ನಾವು ಪ್ರತಿ ಧ್ವನಿಯನ್ನು ಸಂಭಾಷಣೆಗೆ ಆಹ್ವಾನಿಸುವುದು ಮತ್ತು ಪರಸ್ಪರ ಕೇಳುವ ನಮ್ಮ ಸಾಮರ್ಥ್ಯವನ್ನು ಆಳಗೊಳಿಸುವುದು ಅತ್ಯಗತ್ಯವಾಗಿದೆ.

CitizenSnap
ತಮ್ಮನ್ನು ಅಭಿವ್ಯಕ್ತಿಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಒಟ್ಟಿಗೆ ಮೋಜು ಮಾಡಲು ಜನರಿಗೆ ಅವಕಾಶ ಕಲ್ಪಿಸುವ ಮೂಲಕ ಮಾನವರ ಪ್ರಗತಿಗೆ ಕೊಡುಗೆ ನೀಡುವುದು ನಮ್ಮ ಧ್ಯೇಯವಾಗಿದೆ.
ನಮ್ಮ ನಾಲ್ಕನೆಯ ವಾರ್ಷಿಕ CitizenSnap ವರದಿಯು ಕೇವಲ ನಮ್ಮ ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಗುರಿಗಳಿಗೆ ಸಂಬಂಧಿಸಿದ Snap ನ ಪ್ರಗತಿಯ ಕುರಿತು ತಿಳಿಸುವುದಷ್ಟೇ ಅಲ್ಲ, ಅದರ ಜೊತೆಗೆ ನಿರಂತರವಾಗಿ ಸುಧಾರಣೆ ಮಾಡುವ ನಮ್ಮ ನಿರ್ಧಾರಗಳ ಕುರಿತಾಗಿಯೂ ಮಾಹಿತಿ ನೀಡುತ್ತದೆ. ನಾವು ನಮ್ಮ ಉದ್ದೇಶಗಳತ್ತ ಮುಂದುವಯುತ್ತಿರುವಂತೆ, ಸಕಾರಾತ್ಮಕ ಪ್ರಭಾವವನ್ನು ಮುನ್ನಡೆಸಲು Snap ಗೆ ಹೊಸ ಮತ್ತು ಹೆಚ್ಚಿನ ಅವಕಾಶಗಳು ಯಾವಾಗಲೂ ಇರುತ್ತವೆ ಎನ್ನುವುದನ್ನು ಕೂಡ ನಾವು ಗುರುತಿಸುತ್ತೇವೆ.
ಈ ಕಾರ್ಯ ಎಂದಿಗೂ ಪೂರ್ಣಗೊಳ್ಳದು.
Snap ನ ಉದ್ಘಾಟನಾ ಬೆಳವಣಿಗೆ ದಿನ
Snap ನ ಚೊಚ್ಚಲ ಬೆಳವಣಿಗೆ ದಿನಕ್ಕಾಗಿ ಲಾಸ್ ಏಂಜಲೀಸ್‌ನಲ್ಲಿ ನೂರಾರು Snap inc. ತಂಡದ ಸದಸ್ಯರು ಜೊತೆಗೂಡಿದರು — ಮತ್ತು ತಮ್ಮ ವೃತ್ತಿಬದುಕನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಉಪಯುಕ್ತವಾಗುವ ಕಲಿಕೆಗಳು ಮತ್ತು ಟೂಲ್‌ಗಳನ್ನು ಪಡೆದುಕೊಂಡರು.
SnapNoir @ ಆಫ್ರೋಟೆಕ್
ನಮ್ಮ ERG SnapNoir, ಆಸ್ಟಿನ್, TX ನಲ್ಲಿ ನಡೆದ ಆಫ್ರೋಟೆಕ್ ನಲ್ಲಿ ಭಾಗವಹಿಸಿದ್ದರು. ಕ್ರಿಯೇಟರ್ ಮತ್ತು ಸಮುದಾಯದ ಬೆಳವಣಿಗೆಯನ್ನು ಪೋಷಿಸಲು, AR ನಲ್ಲಿ ನಮ್ಮ ನಾಯಕತ್ವದ ಸ್ಥಾನವನ್ನು ಗಟ್ಟಿಗೊಳಿಸಲು ಮತ್ತು ಕಡಿಮೆ ಪ್ರಾತಿನಿಧ್ಯದ ಮಾರುಕಟ್ಟೆಗಳಲ್ಲಿ ನಮ್ಮ ಬ್ರಾಂಡ್ ಪ್ರಸ್ತುತತೆಯನ್ನು ಹೆಚ್ಚಿಸಲು ನಾವು ಕಚೇರಿ ಕಾರ್ಯಕ್ರಮವನ್ನು ಆಯೋಜಿಸಿದೆವು.
ನಮ್ಮ Snap ಸ್ಟಾರ್‌ಗಳು ಮತ್ತು Snap Lens ನೆಟ್‌ವರ್ಕ್ ಅನ್ನು ಹೈಲೈಟ್ ಮಾಡಿ, 21 ಕ್ರಿಯೇಟರ್‌ಗಳು ಮತ್ತು 28 ಲೆನ್ಸ್ ಡೆವೆಲಪರ್ಸ್‌ಗಳನ್ನು ಒಳಗೊಂಡಂತೆ 165 ಕ್ಕೂ ಹೆಚ್ಚು ಜನರು Snapchat ಉತ್ಪನ್ನ , Snap Inc ಕಂಪನಿಯ ಬಗ್ಗೆ ಹೆಚ್ಚು ಪರಿಚಿತರಾದರು, ನಕ್ಕರು, ಕಲಿತರು ಮತ್ತು ವೃದ್ಧಿಸಿದ ವಾಸ್ತವಿಕತೆಯಲ್ಲಿ ನಾವೇಕೆ ನಾಯಕರು ಎಂಬುದನ್ನು ತಿಳಿದುಕೊಂಡರು.
Snap ನಲ್ಲಿ ಜೀವನ
Team Snap ಗೆ ಸೇರಲು ಸಿದ್ಧರಾಗಿದ್ದೀರಾ?